Centered Logo
ಮುಖಪುಟ ನಮ್ಮ ಬಗ್ಗೆ ಸೌಲಭ್ಯಗಳು ಅರ್ಜಿ ಸಲ್ಲಿಸಿ ಇ-ಸೇವೆಗಳು ಸಂಪರ್ಕ
ಉಪಲಾಷಿತ ಯೋಜನೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ಮೇಲೆ ನೆಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಡಿಜಿಟಲ್‌ ಗುರುತಿನ ಕಾರ್ಡ್‌ ನೀಡುತ್ತಿರುತ್ತದೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂದಪಟ್ಟ ಪ್ರತಿ ಸೇವೆ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಹಾಗು ಪೋಷಕರ ಗಮನಕ್ಕೆ ತರುವುದರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆಯನ್ನು ನೀಡಿ ಸೇವೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಕ್ಯೂ ಆರ್‌ ಕೋಡ್‌ ತಂತ್ರಾಂಶವನ್ನು ಯೋಜನೆಯ ಗರುತಿನ ಕಾರ್ಡ್‌ ಹೊಂದಿರುತ್ತದೆ, ಈ ಯೋಜನೆಗೆ ಸಂಬಂಧಿಸಿದಂತೆ ಪೋಲಿಸ್‌ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಗತಿ ಪರ ಸಂಸ್ಥೆಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದ್ಯಮಗಳ ಮೂಲಕ ಯೋಜನೆಯ ಉಪಯುಕ್ತ ಮಾಹಿತಿಯನ್ನು ತಿಳಿಸುವ ಕಾರ್ಯಮಾಡುತ್ತಿದ್ದಾರೆ, ಉಪಲಾಷಿತ ಯೋಜನೆಯ ಡಿಜಿಟಲ್‌ ಗುರುತಿನ ಕಾರ್ಡ್ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಕಿರುಕುಳ ಹಾಗು ದೌರ್ಜನ್ಯದ ಬಗ್ಗೆ ಸಂಬಂಧಪಟ್ಟಂತೆ ಪೋಲಿಸ್ ಇಲಾಖೆಯ ಸಹಾಯೋಗದೊಂದಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಯೋಜನೆಯಿಂದ ಮಾಹಿತಿ ಪಡೆಯಲಾಗುತ್ತದೆ ಹಾಗು ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಜೊತೆಗೆ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ನೆರವನ್ನು ನೀಡುತ್ತದೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರತಿ ಸೇವೆ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರುವುದರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆಯನ್ನು ನೀಡಿ ಸೇವೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಕ್ಯೂ ಆರ್ ಕೋಡ್ ತಂತ್ರಾಂಶವನ್ನು ಯೋಜನೆಯ ಗುರುತಿನ ಕಾರ್ಡ್ ಹೊಂದಿರುತ್ತದೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನೆಡೆದ ನಂತರ ಕ್ರಮ ತೆಗೆದುಕೊಳ್ಳುವುದರ ಬದಲಾಗಿ ಮುಂಜಾಗ್ರತೆ ವಹಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಗುವಂತಹ ಅನಾಹುತಗಳನ್ನು ತಡೆಯಬಹುದಾಗಿರುತ್ತದೆ