Centered Logo
ಮುಖಪುಟ ನಮ್ಮ ಬಗ್ಗೆ ಸೌಲಭ್ಯಗಳು ಅರ್ಜಿ ಸಲ್ಲಿಸಿ ಇ-ಸೇವೆಗಳು ಸಂಪರ್ಕ

ವಿದ್ಯಾರ್ಥಿಗಳಿಗೆ ನೀಡುವ ಗುರುತಿನ ಕಾರ್ಡ್ ನಲ್ಲಿ ಡಿಜಿಟಲ್ ತಂತ್ರಾಂಶವಿರುವ ಗುರುತಿನ ಕಾರ್ಡ್ಆಗಿ ಯೋಜನೆಯ ಮೂಲಕವೆ ನೀಡಲಾಗುತ್ತದೆ ಶಾಲೆ ಕಾಲೇಜುಗಳ ಸ್ವಂತ ಮಾದರಿಯ ಗುರುತಿನ ಕಾರ್ಡ ಅನ್ನು ಡಿಜಿಟಲ್ ತಂತ್ರಾಂಶ ಅಳವಡಿಸಿ ಯಾವುದೇ ಬದಲಾವಣೆ ಇಲ್ಲದೆ ಶಾಲೆ ಕಾಲೇಜು ನೀಡಲಾಗುತ್ತದೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂದಪಟ್ಟ ಪ್ರತಿ ಸೇವೆ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಹಾಗು ಪೋಷಕರ ಗಮನಕ್ಕೆ ತರುವುದರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆಯನ್ನು ನೀಡಿ ಸೇವೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಕ್ಯೂ ಆರ್ ಕೋಡ್ ತಂತ್ರಾಂಶವನ್ನು ಈ ಗರುತಿನ ಕಾರ್ಡ್ ಹೊಂದಿರುತ್ತದೆ

ಶಿಕ್ಷಣ ಇಲಾಖೆ ಹಾಗು ಶಾಲೆ ಕಾಲೇಜುಗಳ ಪ್ರತಿ ಹಂತದ ಪ್ರಕಟಣೆಗಳು, ಸೇವೆಗಳು ಕಾರ್ಯಕ್ರಮಗಳು, ಪರೀಕ್ಷೆ ಹಾಗು ಇತರೆ ತರಭೇತಿ ಮಾಹಿತಿಗಳು, ವಿದ್ಯಾರ್ಥಿ ವೇತನ ಇತರೆ ಪ್ರತಿ ಪ್ರಕಟಣೆಗಳನ್ನು ಪ್ರತಿದಿನ ಅಪ್ ಡೇಟ್ ಮಾಡುವ ಸೌಲಭ್ಯ ವಳಗೊಂಡಿದ್ದು ಇದರಿಂದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಇರುವ ಪ್ರಗತಿಪರ ಕಾರ್ಯಕ್ರಮಗಳು ಹಾಗು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗು ಸರ್ಕಾರೇತರ ಸಂಸ್ಥೆಗಳಿಂದ ನೀಡುವ ವಿದ್ಯಾರ್ಥಿ ವೇತನ ಹಾಗು ಇತರೆ ವಿಶೇಷ ಸೇವೆ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಸಕಾಲ ಸಮಯದಲ್ಲಿ ತಲುಪಿಸಿ ಪೋಷಕರಿಗೆ ಅನುಕೂಲತೆಯನ್ನು ಮಾಡಿಕೊಡುವುದು ಉಪಲಾಷಿತ ಯೋಜನೆಯ ಅನುಷ್ಠಾನದ ಉದ್ದೇಶವಾಗಿರುತ್ತದೆ.

ಎಲ್ಲಾ ಮಾದರಿಯ ವಿದ್ಯಾರ್ಥಿಗಳಿಗೆ ಒಂದೇ ಮಾದರಿಯ ಗರುತಿನ ಕಾರ್ಡ್ ನೀಡಲಾಗುತ್ತದೆ ಹಾಗು ಶಾಲೆ ಕಾಲೇಜು ಶಿಕ್ಷಣ ಸಂಸ್ಥೆಗಳು ತಮ್ಮದೆ ಲೋಗೊ ಹಾಗು ಗುರುತಿನ ಕಾರ್ಡ್ ಮಾದರಿಯನ್ನು ಹೊಂದಿದ್ದರೆ ಅದೇ ಮಾದರಿಯ ಗುರುತಿನ ಕಾರ್ಡಮಾದರಿಗೆ ಉಪಲಾಷಿತ ಯೋಜನೆ ತಂತ್ರಾಂಶವನ್ನು ಬಳಸಿ ನೀಡಲಾಗುತ್ತದೆ. ಇದರಲ್ಲಿ ನಮೂದಿಸಿರುವ ಗುರುತಿನ ಕಾರ್ಡ್ ಸಾಮಾನ್ಯ ಮಾದರಿಯದಾಗಿರುತ್ತದೆ. ವಿದ್ಯಾರ್ಥಿಗಳ ಬೆಳವಣೆಗೆಗೆ ಸಹಕಾರಿಯಾಗುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ನೀಡುವ ವಿದ್ಯಾರ್ಥಿವೇತನ, ಉಚಿತ ತರಭೇತಿ ಶಿಭಿರಗಳು ಹಾಗು ಕಾರ್ಯಗಾರಗಳು, ಕ್ರೀಡ ಹಾಗು ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪೋಷಕರು ಹಾಗು ವಿದ್ಯಾರ್ಥಿಗಳು ಪಡೆಯಬಹುದಾಗಿರುತ್ತದೆ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಆಧ್ಯತೆಯನ್ನು ನೀಡಲಾಗಿರುತ್ತದೆ.

ಉಪಲಾಷಿತ ಯೋಜನೆಯ ಗುರುತಿನ ಕಾರ್ಡ್ ಸ್ಕ್ಯಾನ್ ಮಾಡಿದರೆ ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಮಾಹಿತಿ ಲಭ್ಯ ವಾಗುತ್ತದೆ, ಈ ಸೇವೆಯನ್ನು ವಾಟ್ಸಪ್ ಮತ್ತು ಸಾಮಾನ್ಯ ಕರೆಗಳ ಮೂಲಕವು ಸಹ ಪಡೆಯುವ ಸೌಲಭ್ಯ ಯೋಜನೆಯ ಮೂಲಕ ಪಡೆಯಬಹುದಾಗಿರುತ್ತದೆ

ಒಂದು ಪ್ರತಿಷ್ಟಿತ ಸಂಸ್ಥೆ ನೆಡೆಸಿದ ಅಧ್ಯಾಯನದಲ್ಲಿ ವಿದ್ಯಾರ್ಥಿಗಳ ಮೇಲೆ ನೆಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಮಾದಕ ವಸ್ತುವಿನ ಬಲಕೆಯ ಈ ಅಂಕಿ ಅಂಶ ದಿಗ್ಬ್ರಮೆಗೊಳಿಸುತ್ತದೆ, ಸರಿಸುಮಾರು ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು CSA ಅನ್ನು ಅನುಭವಿಸುತ್ತಿದ್ದಾರೆಂದು ವರದಿ ಮಾಡಿದ್ದಾರೆ. ಬಹುಪಾಲು (40.0%) ವಿದ್ಯಾರ್ಥಿಗಳು CSA ಯ ವಿಷಯ ಬಹಿರಂಗ ಪಡಿಸುವುದರಲ್ಲಿ ಋಣಾತ್ಮಕ ಪರಿಣಾಮಗಳ ಭಯ ಮತ್ತು ತಪ್ಪಿತಸ್ಥ ಭಾವನೆಗಳು ಹಾಗು ಅವರ ಕುಟುಂಬದ ಸದಸ್ಯರಿಗೆ ಆಗುವ ನಿಂದನೆಯಿಂದಾಗಿ ಹಂಚಿಕೊಂಡಿರುವುದಿಲ್ಲ, ಮತ್ತೊಂದು ಅಧ್ಯಯನ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುವಿನ ಬಳಕೆಯ ಶೇಕಡ ಪ್ರಮಾಣದ ಮಾದರಿಯನ್ನು ಅಧ್ಯಯನ ಮಾಡಿದೆ ಅದರಂತೆ ಈ ಕೆಳಗಿನ ಅಂಕಿ ಅಂಶವನ್ನು ನೋಡಬಹುದಾಗಿರುತ್ತದೆ, ಈ ಗುರುತಿನ ಕಾರ್ಡ್ ಮೂಲಕ ವಿದ್ಯಾರ್ಥಿಗಳ ಸುರಕ್ಷತೆ ಹಾಗು ಪೋಷಕರು ವಿದ್ಯಾರ್ಥಿಗಳ ದಿನಚರಿ ಹಾಗು ಅವರ ಅಧ್ಯಯನದ ಮೇಲೆ ಗಮನ ನೀಡುವುದರಿಂದ ಇದರ ಪ್ರಮಾಣವನ್ನು ತಗ್ಗಿಸಬಹುದು ಈ ಗುರುತಿನ ಕಾರ್ಡ್ ಪಡೆಯಲು ಕೇವಲ ಕಾರ್ಯನಿರ್ವಾಹಣೆ ಶುಲ್ಕ ಇನ್ನೂರು ರೂಗಳನ್ನು ಮಾತ್ರ ನಿಗದಿ ಮಾಡಲಾಗಿದ್ದು ವಿದ್ಯಾರ್ಥಿಗಳ ಸುರಕ್ಷತೆ ಜೊತೆಗೆ ಪೋಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿದ್ಯಾರ್ಥಿವೇತನ, ಪರೀಕ್ಷೆ ತರಭೇತಿ, ಕಾರ್ಯಗಾರಗಳು ಇತರೆ ಹಲವು ಮುಖ್ಯ ಸೇವೆಗಳನ್ನು ಸಹ ನೀಡುತ್ತದೆ ಈ ಉದ್ದೇಶದಿಂದ ಇನ್ನು ಮುಂದಾದರು ಎಲ್ಲಾ ಹಂತದ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆ ಹಾಗು ಅವರ ವಿಕಾಸದ ಬಗ್ಗೆ ಗಮನದಲ್ಲಿಟ್ಟುಕೊಂಡು ಸಮರ್ಪಕವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂಬ ಮಾಹಿತಿಯನ್ನು ಅಂಕಿ ಅಂಶಗಳ ಜೊತೆ ಪ್ರಕಟಿಸಲಾಗಿದೆ.